ರಾಜ್ಯಕೈ ಶಾಸಕರ ಪುತ್ರನ ವಿವಾಹದಲ್ಲಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿ, ಮಾಸ್ಕ್ ಧರಿಸದೇ ಪಾಲ್ಗೊಂಡ ಆರೋಗ್ಯ ಸಚಿವ ಶ್ರೀರಾಮುಲು!
ದೇಶಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದರೂ ಜನನಾಯಕರೇ ಸಾಮಾಜಿಕ ಅಂತರವನ್ನು ಮರೆತು ಶುಭ ಸಮಾರಂಬಗಳನ್ನು ನಡೆಸುತ್ತಿರುವುದು ಮಾತ್ರ ವಿಪರ್ಯಾಸ. ಬಳ್ಳಾರಿ ಜಿಲ್ಲೆ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಸಾಮಾಜಿಕ ಅಂತರದ ನಿಯಮಾವಳಿಯನ್ನು ಗಾಳಿಗೆ ತೂರಿ ನೂರಾರು ಮಂದಿ ಪಾಲ್ಗೊಂಡಿದ್ದರು.