ವಿದೇಶಚಂದ್ರಯಾನ-2 ವಿಫಲಗೊಂಡಿದ್ದಕ್ಕೆ ಇಸ್ರೋವನ್ನು ಅಣಕಿಸಿದ್ದ ಪಾಕಿಸ್ತಾನದ ನಾಯಕ ಈಗ ಹೇಳಿದ್ದಿಷ್ಟು...
ಚಂದ್ರಯಾನ-2 ಯೋಜನೆ ವಿಫಲವಾದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ಇಸ್ರೋ) ಲೇವಡಿ ಮಾಡಿದ್ದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮಾಜಿ ನಾಯಕ ಫವಾದ್ ಚೌಧರಿ, ಬುಧವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿದ್ದಕ್ಕೆ ಇಸ್ರೋವನ್ನು ಅಭಿನಂದಿಸಿದ್ದಾರೆ.