ಪಿಎಫ್ಐ ನಿಷೇಧ

ದುಷ್ಕೃತ್ಯಕ್ಕೆ ಸಂಚು: ಮಂಗಳೂರಿನಲ್ಲಿ ನಿಷೇಧಿತ ಪಿಎಫ್ಐಗೆ ಸೇರಿದ ಐವರ ಬಂಧನ!
ಪಿಎಫ್ಐ ಸಂಘಟನೆ ನಿಷೇಧದ ಬಳಿಕವೂ ದುಷ್ಕರ್ಮಿಗಳು ವಿಧ್ವಂಸಕಕ್ಕೆ ಸಂಚು ರೂಪಿಸುವುದನ್ನು ಮುಂದುವರಿಸಿದ್ದಾರೆ. ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಪಿಎಫ್ಐಗೆ ಸೇರಿದ ಐವರನ್ನು ಇಂದು ಮಂಗಳೂರಿನಲ್ಲಿ ಬಂಧಿಸಲಾಗಿದೆ.

ನಮ್ಮ ಕಾಂಗ್ರೆಸ್ ಸರ್ಕಾರ ಪಿಎಫ್‌ಐ ವಿರುದ್ಧ ಪ್ರಕರಣ ರದ್ದುಮಾಡಿಲ್ಲ: ರಾಮಲಿಂಗಾ ರೆಡ್ಡಿ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ PFI ಮೇಲಿನ ಒಂದೇ ಒಂದು ಪ್ರಕರಣವನ್ನು ಹಿಂದೆ ಪಡೆದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಪಿಎಫ್ಐ ನಿಷೇಧವನ್ನು ಸೆಪ್ಟೆಂಬರ್ ಕ್ರಾಂತಿ ಎಂದಿದ್ದೇಕೆ ಎಡಿಜಿಪಿ ಅಲೋಕ್ ಕುಮಾರ್?; ಟ್ವೀಟ್ ವೈರಲ್ ಬಗ್ಗೆ ಇಲ್ಲಿದೆ ಮಾಹಿತಿ
ನಾಗರಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಸಂಘಟನೆಗಳು ಸೆಪ್ಟೆಂಬರ್ ತಿಂಗಳಿನಲ್ಲಿಯೇ ನಿಷೇಧ ಮಾಡಿರುವುದು ಗಮನಾರ್ಹ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದ್ದಾರೆ.

PFI ನಿಷೇಧ: ಡಿಕೆಶಿ ಸ್ವಾಗತ, SDPI ಕುರಿತು ಪ್ರಶ್ನೆ ಎತ್ತಿದ ಕಾಂಗ್ರೆಸ್, RSS ಕುರಿತ ಸಿದ್ದು ಹೇಳಿಕೆಗೆ ಬಿಎಸ್ ವೈ ಗರಂ
ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್, SDPIನ ನಿಷೇಧವೇಕಿಲ್ಲ ಎಂದು ಪ್ರಶ್ನೆ ಮಾಡಿದ್ದು, ಮಾತ್ರವಲ್ಲದೇ PFI ಮತ್ತು SDPI ಸಂಘಟನೆಗಳು ಬಿಜೆಪಿ ಮತ್ತು RSS ನ B Team ಎಂದು ಕಿಡಿಕಾರಿದೆ.

PFI ಗೆ ಮತ್ತೊಂದು ಶಾಕ್: ಸಂಘಟನೆ ನಿಷೇಧ ಬೆನ್ನಲ್ಲೇ ವೆಬ್‌ಸೈಟ್, ಸಾಮಾಜಿಕ ಮಾಧ್ಯಮಗಳ ಖಾತೆ ನಿರ್ಬಂಧಕ್ಕೆ ಕೇಂದ್ರ ಆದೇಶ
ದೇಶಾದ್ಯಂತ ಎನ್‌ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಅವುಗಳ ಅಂಗಸಂಸ್ಥೆಗಳ ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಖಾತೆಗಳನ್ನ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

PFI ಮಾತ್ರವಲ್ಲ, ಸಮಾಜ ಹಾಳು ಮಾಡುತ್ತಿರುವ RSS ಅನ್ನು ಕೂಡ ನಿಷೇಧಿಸಲಿ: ಸಿದ್ದರಾಮಯ್ಯ ಕಿಡಿ
PFI ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ RSS ಅನ್ನು ಕೂಡ ನಿಷೇಧಿಸಲಿ ಎಂದು ಹೇಳಿದ್ದಾರೆ.

ಪಿಎಫ್ಐ ಸಂಘಟನೆ ನಿಷೇಧ; ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ: ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್
ಭಾರತ ಸರ್ಕಾರವು ಪಿಎಫ್ಐ (PFI) ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕಾನೂನು ಬಾಹಿರ ಕಾಯ್ದೆಯಡಿ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಪೊಲೀಸರಿಗೆ ಸೂಚಿಸಿದ್ದಾರೆ.

ಸಂಪುಟ ಸಭೆ ಇಂದು: ಪಿಎಫ್ಐ ನಿಷೇಧ ಕುರಿತು ಮಹತ್ವದ ನಿರ್ಣಯ ಸಾಧ್ಯತೆ
ನಗರದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಪಿಎಫ್ಐ ನಿಷೇಧ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

