ದೇಶದರ ನಿಗದಿ ಸೂತ್ರ ಪರಿಷ್ಕರಣೆ: ಸಿಎನ್ಜಿ, ಪಿಎನ್ಜಿ ತೈಲ ದರ ಶೇ.10ರಷ್ಟು ಇಳಿಕೆ, ಬೆಲೆ ನೀತಿಯಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರ ಅನುಮೋದನೆ
ನೈಸರ್ಗಿಕ ಅನಿಲದ ದರ ನಿಗದಿಗೆ ಹೊಸ ಮಾನದಂಡಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ದರ ನಿಗದಿ ಸೂತ್ರ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಇದರಂತೆ ಗೃಹ ಬಳಕೆಯ ಪಿಎನ್ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಲಿದೆ.