ರಾಜ್ಯಭಾರತ ಲಾಕ್ಡೌನ್: ಮೊಟ್ಟೆ, ಮ್ಯಾಗಿ ಕಳಿಸಿ ಎಂದು ಪಿಎಂಒ ಕಚೇರಿಗೆ ಟ್ವೀಟ್ ಮಾಡಿದ ಮಂಗಳೂರು ವೈದ್ಯಕೀಯ ವಿದ್ಯಾರ್ಥಿನಿ!
ಲಾಕ್ಡೌನ್ ಅವಧಿಯಲ್ಲಿ ಜನರು ಅಗತ್ಯ ವಸ್ತುಗಳ ಕೊರತೆ ನಡುವೆಯೂ ಧಾವಂತವಿಲ್ಲದ ಜೀವನವನ್ನು ಮುಂದುವರಿಸಲು ಜನರು ಒಗ್ಗಿದ್ದಾರೆ. ಆದರೆ ಮಂಗಳುರಿನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನಗೆ ಮೊಟ್ಟೆ ಹಾಗೂ ಮ್ಯಾಗಿಯು ಅಗತ್ಯವಿದೆ, ಕಳಿಸಿಕೊಡಿ ಎಂದು ಪ್ರಧಾನಮಂತ್ರಿ ಕಚೇರಿಗೆ (ಪಿಎಂಒ) ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾಳೆ.