ರಾಜ್ಯಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಪರೀಕ್ಷಾ ಮಂಡಳಿಗಳು ಶೀಘ್ರ ವಿಲೀನ: ಎಸ್ ಸುರೇಶ್ಕುಮಾರ್
ರಾಜ್ಯದಲ್ಲಿ ಈಗಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಪರೀಕ್ಷಾ ಮಂಡಳಿಗಳು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ಪ್ರತ್ಯೇಕವಾಗಿ ನಡೆಸುತ್ತಿದ್ದು, ನೂತನ ಶಿಕ್ಷಣ ನೀತಿಯ ಪ್ರಕಾರ ಬೇರೆ ರಾಜ್ಯಗಳ ರೀತಿಯೇ ರಾಜ್ಯದಲ್ಲಿಯೂ ಕೂಡ ಎರಡು ಪರೀಕ್ಷಾ ಮಂಡಳಿಗಳನ್ನು ಶೀಘ್ರದಲ್ಲಿ ವಿಲೀನಗೊಳಿಸಲಾಗುವುದು.