ದೇಶಆಗ್ರಾ: ಪಾತಾಳಕೋಟ್ ಎಕ್ಸ್ಪ್ರೆಸ್ನಲ್ಲಿ ಅಗ್ನಿ ಅವಘಡ; ಹಲವರಿಗೆ ಸುಟ್ಟ ಗಾಯ!
ಆಗ್ರಾ ಕ್ಯಾಂಟ್ನಿಂದ ಗ್ವಾಲಿಯರ್ ಕಡೆಗೆ ಚಲಿಸುತ್ತಿದ್ದ ಪಾತಾಳಕೋಟ್ ಎಕ್ಸ್ಪ್ರೆಸ್ ನ ಸಾಮಾನ್ಯ ಬೋಗಿಗಳಲ್ಲಿ ಬುಧವಾರ ಮಧ್ಯಾಹ್ನ ಹಠಾತ್ ಲೈಟ್ಗಳು ಸಿಡಿದ ಕಾರಣ ಬೆಂಕಿ ಕಾಣಿಸಿಕೊಂಡಿದೆ. ಕ್ಯಾಂಟ್ನಿಂದ ಸುಮಾರು 8 ಕಿಮೀ ದೂರದಲ್ಲಿರುವ ಭಂಡೈ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದ ನಂತರ ಪ್ರಯಾಣಿಕರು ಭಯಭೀತರಾಗಿದ್ದರು.