ವಿದೇಶಇರಾನ್ನಲ್ಲಿ ಗುಂಡಿಕ್ಕಿ 9 ಪಾಕಿಸ್ತಾನಿಯರ ಬರ್ಬರ ಹತ್ಯೆ; ಸಮಗ್ರ ತನಿಖೆಗೆ ಪಾಕ್ ಆಗ್ರಹ!
ಪಾಕಿಸ್ತಾನದ ಮೇಲೆ ಇರಾನ್ ನಡೆಸಿದ ವೈಮಾನಿಕ ದಾಳಿಯ 12 ದಿನಗಳ ನಂತರ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಹೆಚ್ಚಾಗಿದೆ. ನಿನ್ನೆ ರಾತ್ರಿ ಪಾಕಿಸ್ತಾನದ ಪಕ್ಕದಲ್ಲಿರುವ ಇರಾನ್ನ ಆಗ್ನೇಯ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಒಂಬತ್ತು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.