ದೇಶತಿರುಮಲದ ಭಕ್ತರಿಗೆ ಶುಭಸುದ್ದಿ! ಚೆನ್ನೈ, ಬೆಂಗಳೂರು, ಹೈದರಾಬಾದ್ ಗಳಲ್ಲಿ ಪವಿತ್ರ ಲಡ್ಡು ಪ್ರಸಾದ ಶೀಘ್ರ ಲಭ್ಯ
ಕೊರೋನಾವೈರಸ್ ಲಾಕ್ಡೌನ್ ಹೊರತಾಗಿಯೂ, ತಿರುಮಲ ವೆಂಕಟೇಶ್ವರನ ಭಕ್ತಾದಿಗಳು ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಪವಿತ್ರ 'ಲಡ್ಡು ಪ್ರಸಾದಗಳನ್ನು ಪಡೆಯಲಿದ್ದಾರೆ ಎಂದು ದೇವಾಲಯದ ಕಾರ್ಯಕಾರಿ ಅಧಿಕಾರಿಗಳು ಹೇಳಿದ್ದಾರೆ.