ದೇಶಗಲಭೆ ಪೀಡಿತ ಈಶಾನ್ಯ ದೆಹಲಿಯಲ್ಲಿ ಮರುಕಳಿಸಿದ ಶಾಂತಿ: ಐದು ದಿನಗಳ ನಂತರ ತೆರೆದ ಅಂಗಡಿಗಳು
ಈ ವಾರದ ಆರಂಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರುದ್ಧವಾದ ಗುಂಪುಗಳ ನಡುವಣ ಘರ್ಷಣೆಯಿಂದಾಗಿ ಹಿಂಸಾಚಾರವೇರ್ಪಟ್ಟಿದ್ದ ಈಶಾನ್ಯ ದೆಹಲಿಯಲ್ಲಿ ಇಂದು ಬೆಳಗ್ಗೆ ಶಾಂತಿಯುತ ಪರಿಸ್ಥಿತಿ ಕಂಡುಬಂದಿತು. ಈ ಪ್ರದೇಶದಲ್ಲಿನ ನಿವಾಸಿಗಳು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.