ದೇಶಲಡಾಖ್: ಚೀನಾದೊಂದಿಗಿನ ಭಿನ್ನಾಭಿಪ್ರಾಯದ ಮಧ್ಯೆ ಎಲ್ಎಸಿಯಲ್ಲಿ ಪರಿಸ್ಥಿತಿ ಪರಿಶೀಲಿಸಿದ ಉತ್ತರ ಕಮಾಂಡರ್!
ಪೂರ್ವ ಲಡಾಖ್ ನ ವಾಸ್ತವಿಕ ನಿಯಂತ್ರಣ ರೇಖೆ-ಎಲ್ ಎಸಿ ಬಳಿ ಚೀನಾದೊಂದಿಗೆ ಭಿನ್ನಭಿಪ್ರಾಯ ಹೆಚ್ಚುತ್ತಿರುವಂತೆ ಲೆಹ್ ನಲ್ಲಿ ಬೀಡು ಬಿಟ್ಟಿರುವ ಉತ್ತರ ಸೇನಾ ಕಮಾಂಡ್ ಮುಖ್ಯಸ್ಥರು ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.