ರಾಜ್ಯಸರ್ಕಾರ ಮೇಕೆದಾಟು ಅಣೆಕಟ್ಟು ಕಟ್ಟಿಯೇ ಸಿದ್ದ ಎನ್ನುತ್ತಿದೆ, ಆದರೆ ಪರಿಸರದ ಮೇಲೆ ಅದರ ಪ್ರಭಾವವೇನು: ಪರಿಸರವಾದಿಗಳ ಪ್ರಶ್ನೆ
ಮೇಕೆದಾಟುವಿನಲ್ಲಿ ಜಲ ವಿದ್ಯುತ್ ಮತ್ತು ಕುಡಿಯುವ ನೀರು ಯೋಜನೆಗೆ ಅಣೆಕಟ್ಟು ನಿರ್ಮಿಸುವುದಕ್ಕೆ ರಾಜ್ಯದ ಎಲ್ಲಾ ಪಕ್ಷಗಳು ಬೆಂಬಲ ಸೂಚಿಸುತ್ತಿವೆ. ಆದರೆ ರಾಜಕೀಯ ನಾಯಕರ ಈ ಒಗ್ಗಟ್ಟು ಪರಿಸರ ಸಂರಕ್ಷಣಾವಾದಿಗಳು ಮತ್ತು ನಾಗರಿಕರಲ್ಲಿ ಆತಂಕವನ್ನುಂಟುಮಾಡಿದೆ.