ರಾಜ್ಯಗ್ರಾಮ ಪಂಚಾಯತ್ ನ ಟ್ಯಾಂಕ್, ಕೊಳ, ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆಗೆ ಅವಕಾಶ:ಸಚಿವ ಸಂಪುಟ ಒಪ್ಪಿಗೆ
ದುಬಾರಿ ಮರಳು ಬೆಲೆ ನಿಯಂತ್ರಣಕ್ಕೆ ಮತ್ತು ಸರ್ಕಾರಕ್ಕೆ ಹೆಚ್ಚಿನ ಆದಾಯ ತರಲು ರಾಜ್ಯ ಸಚಿವ ಸಂಪುಟ ನದಿ ಜಲಾನಯನ ಮತ್ತು ತೀರ ಪ್ರದೇಶಗಳಿಗೆ ಸೀಮಿತವಾಗಿದ್ದ ಮರಳು ಗಣಿಗಾರಿಕೆ ವಿಸ್ತರಿಸಲು ನಿರ್ಧರಿಸಿದೆ. ಸಚಿವ ಸಂಪುಟ ಹೊಸ ಮರಳು ನೀತಿಗೆ ಒಪ್ಪಿಗೆ ನೀಡಿದ್ದು ಅದರ ಪ್ರಕಾರ ಟ್ಯಾಂಕ್, ಕೆರೆ ಮತ್ತು ಪಟ್ಟಾ ಜಮೀನುಗಳಲ್ಲಿ ಸಹ ಗಣಿಗಾರಿಕೆ ಮಾಡಬಹುದಾಗಿದೆ.