ರಾಜಕೀಯತಳಮಟ್ಟದಿಂದ ಪಕ್ಷ ವಿಸ್ತರಣೆ, ಸಾಂಪ್ರದಾಯಿಕ ಮತದಾರರ ಸೆಳೆತ: ಡಿ.ಕೆ. ಶಿವಕುಮಾರ್ ಮುಂದಿನ ಬಹುದೊಡ್ಡ ಸವಾಲು
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಗುರುವಾರ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಅವರ ನೇಮಕಾತಿ ಮಾಡಿ ಮೂರು ತಿಂಗಳಾಗಿದೆ. ಆದರೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮಾರಂಭ ಮಾಡಲು ಸಾಧ್ಯವಾಗಿರಲಿಲ್ಲ. ರಾಜ್ಯ ಸರ್ಕಾರದಿಂದ ಇಷ್ಟು ದಿನ ಅನುಮತಿ ಸಿಕ್ಕಿರಲಿಲ್ಲ.