ದೇಶನವದೆಹಲಿ: ಪ್ರತಿಭಟನೆ ನಡೆಸಿದ ಸಂಸದರ ಪಕ್ಕೆಲುಬು ಮುರಿತ; ಅನ್ನ, ನೀರು ಕೊಡದೆ ಬಂಧನ- ಕಾಂಗ್ರೆಸ್ ಆರೋಪ
ರಾಹುಲ್ ಗಾಂಧಿ ಇಡಿ ತನಿಖೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಸಂಸದರು ಹಾಗೂ ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.