ಕ್ರಿಕೆಟ್ಮಹಿಳೆಯರ T20 WC: ಅಕ್ಟೋಬರ್ 4ಕ್ಕೆ ಭಾರತ-ಕಿವೀಸ್ ಪಂದ್ಯ, 6ಕ್ಕೆ ಪಾಕ್ ವಿರುದ್ಧ ಹಣಾಹಣಿ!
2024ರ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 4 ರಂದು ಸಿಲ್ಹೆಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತದ ಅಭಿಯಾನ ಪ್ರಾರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ತಿಳಿಸಿದೆ. ಭಾನುವಾರ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.