ಪಂಚ ಗ್ಯಾರಂಟಿ ಯೋಜನೆಗಳು

ಪಂಚ ಗ್ಯಾರಂಟಿ ಯೋಜನೆ ತರಲು ನಾನೇ ಮೂಲ ಕಾರಣ: ಡಿ.ಕೆ ಶಿವಕುಮಾರ್; Video
ಮಾಧ್ಯಮ ಪ್ರತಿನಿಧಿಯೊಬ್ಬರು ನೀವು ಸಿಎಂ ಆಗಿದ್ದಾಗ ಈ ಯೋಜನೆ ತಂದಿದ್ದೀರಿ, ಇಂತಹ ಗುರುತರ ಕೆಲಸ ಮಾಡಿದ್ದೀರಿ ಎಂದು ಹೇಳುವಂಥಹ ಯಾವ ಕೆಲಸ ಮಾಡಿದ್ದೀರಿ ಎಂದು ಕೇಳಿದರು.

'ಶ್ರೀಮಂತರಿಗೂ ಉಚಿತ ವಿದ್ಯುತ್ ಕೊಡಬೇಕಾ, ಲಕ್ಷಾಂತರ ರೂಪಾಯಿ ದುಡಿಯುವ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ನೀಡಬೇಕಾ': 'ಕೈ' ಶಾಸಕರ ಅಸಮಾಧಾನ!
ಮುಂದಿನ ಚುನಾವಣೆಗಳನ್ನು ಕೇವಲ ಗ್ಯಾರಂಟಿಗಳನ್ನು ನೆಚ್ಚಿಕೊಂಡು ಎದುರಿಸಲು ಸಾಧ್ಯವಿಲ್ಲ, ಬದಲಿಗೆ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸುವ ಅಗತ್ಯವಿದೆ ಎಂದು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಂದೆಯೇ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಬಲ ಇ-ಆಡಳಿತದಿಂದ ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಾಯಿತು: NITI Aayog ಮುಂದೆ ಸಿಎಂ ಸಿದ್ದರಾಮಯ್ಯ ವಿವರಣೆ
ಕರ್ನಾಟಕ ಸರ್ಕಾರದ ಅಡಿಯಲ್ಲಿ ಇ-ಆಡಳಿತ ಪರಿಹಾರಗಳು ಪ್ರಬಲವಾಗಿದೆ. ಅದರ ಮೂಲಕ ನಾವು ಕೇವಲ ಮೂರು ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಹೊರತರಲು ಸಾಧ್ಯವಾಯಿತು ಎಂದು ಸಿದ್ದರಾಮಯ್ಯ ನೀತಿ ಆಯೋಗ ಉಪಾಧ್ಯಕ್ಷ ಸುಮನ್ ಬೆರಿ ಅವರಿಗೆ ತಿಳಿಸಿದರು.

ಸರ್ಕಾರಕ್ಕೆ 1 ವರ್ಷ: ಮಧ್ಯವರ್ತಿಗಳ ಹಾವಳಿಯಿಲ್ಲದೆ ಫಲಾನುಭವಿಗಳಿಗೆ ಐದು ಗ್ಯಾರಂಟಿ ತಲುಪಿಸಿದ್ದೇವೆ: ಸಿಎಂ ಸಿದ್ದರಾಮಯ್ಯ
ಕಳೆದ ವರ್ಷ 2023ರ ವಿಧಾನಸಭೆ ಚುನಾವಣೆ ಪೂರ್ವ ಐದು ಪ್ರಮುಖ ಗ್ಯಾರಂಟಿಗಳ ಭರವಸೆಗಳನ್ನು ರಾಜ್ಯದ ಜನತೆಗೆ ನೀಡಿದ್ದೆವು. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಫಲಾನುಭವಿಗಳಿಗೆ ಐದು ಗ್ಯಾರಂಟಿಗಳನ್ನು ತಲುಪಿಸಿದ್ದೇವೆ. ಐದು ಗ್ಯಾರಂಟಿಗಳನ್ನು ನೀಡಲು 36 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

