ಕ್ರಿಕೆಟ್ನಾಳೆ ಟಿ20 ವಿಶ್ವಕಪ್ ಫೈನಲ್: ಮೂರು ಫಾರ್ಮ್ಯಾಟ್ ಕ್ರಿಕೆಟ್ ನಲ್ಲಿ ನಂಬರ್ 1 ಆಗಲು ಕಿವೀಸ್ ಗೆ ಸುವರ್ಣಾವಕಾಶ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಗೇರಿ ವಿರೋಚಿತ ಸೋಲು ಕಂಡು, ಏಕದಿನ ಕ್ರಿಕೆಟ್ ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದ ನ್ಯೂಜಿಲೆಂಡ್ ತಂಡ ಬಳಿಕ ಭಾರತದ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಗೆದ್ದು ಟೆಸ್ಟ್ ಕ್ರಿಕೆಟ್ ನಲ್ಲೂ ಅಗ್ರ ಸ್ಥಾನಕ್ಕೇರಿತ್ತು. ಇದೀಗ ಟಿ20 ಕ್ರಿಕೆಟ್ ನಲ್ಲೂ ಅಗ್ರ ಸ್ಥಾನಕ್ಕೇರುವ ಸುವರ್ಣಾವಕಾಶ ಕೇನ್ ವಿಲಿಯಮ್ಸನ್ ಪಡೆ ಮುಂದಿದೆ.