ರಾಜ್ಯರೈಲ್ವೇ ಪೊಲೀಸ್ ಎಎಸ್ಐಗೂ ಅಂಟಿದ ವೈರಸ್: ನೈಋತ್ಯ ರೈಲ್ವೆಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆ
47 ವರ್ಷದ ರೈಲ್ವೇ ಪೊಲೀಸ್ ಎಎಸ್ಐರಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಇದರೊಂದಿಗೆ ನೈಋತ್ಯ ವಿಭಾಗದ ರೈಲ್ವೆಯಲ್ಲಿ ಈ ವರೆಗೂ 69 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.