ರಾಜ್ಯಬಿಸಿಲಿನ ಝಳದಿಂದ ರೈಲು ಹಳಿಗೆ ಹೊಂದಿಕೊಂಡಿರುವ ರಬ್ಬರ್ಗೆ ಬೆಂಕಿ; 15 ನಿಮಿಷ ನಮ್ಮ ಮೆಟ್ರೋ ಸಂಚಾರ ಸ್ಥಗಿತ!
ಮೆಟ್ರೋ ಹಳಿಗೆ ಹೊಂದಿಕೊಂಡಂತೆ ಇರುವ ರಬ್ಬರ್ಗೆ ಬೆಂಕಿ ಹೊತ್ತುಕೊಂಡ ಕಾರಣ ನೇರಳೆ ಮಾರ್ಗದಲ್ಲಿ ಸುಮಾರು 15 ನಿಮಿಷಗಳ ಕಾಲು ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೀಡಾದರು. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ರೈಲುಗಳ ಸಂಚಾರದಲ್ಲಿ 30 ನಿಮಿಷಗಳವರೆಗೆ ವಿಳಂಬ ಉಂಟಾಯಿತು.