ರಾಜ್ಯಕೊರೋನಾ ಲಾಕ್ ಡೌನ್ ಎಫೆಕ್ಟ್ :ಜೀವನ ನಿರ್ವಹಣೆ ಸಂಕಷ್ಟದಲ್ಲಿ ಗದಗದ ನೇಯ್ಗೆಗಾರರ ಕುಟುಂಬ
ದಶಕಗಳಿಂದ ಚರಕದಿಂದ ನೂಲು ತೆಗೆಯುತ್ತಾ ಸಾಂಪ್ರದಾಯಿಕ ವೃತ್ತಿಯನ್ನು ಗೌರವದಿಂದ ನಡೆಸಿಕೊಂಡು ಬರುವವರು ಇಲ್ಲಿ ಸಾಕಷ್ಟು ಮಂದಿ ಇದ್ದಾರೆ. ಈ ನೇಕಾರರ ಚರಕದಿಂದ ಉತ್ಪಾದಿಸುವ ಎಳೆಗಳು ರುದ್ರಾಕ್ಷಿ ಮಾಲೆಗಳು, ತಾಲಿಗಳು, ಜಪಮಾಲೆಗಳು ಮತ್ತು ಇತರ ಧಾರ್ಮಿಕ ವಸ್ತುಗಳಲ್ಲಿ ಮಣಿಗಳನ್ನು ಕಟ್ಟಲು ಸಹಾಯವಾಗುತ್ತದೆ.