ನೇತ್ರದಾನ

'ಅಣ್ಣಾ ಕಾಪಾಡಿ ಪ್ಲೀಸ್': ರಸ್ತೆಯಲ್ಲೇ ಪತಿಗೆ Heart Attack, ಜೀವ ಉಳಿಸಲು ಅಂಗಲಾಚಿದ ಪತ್ನಿ.. ಒದ್ದಾಡಿ ಪ್ರಾಣಬಿಟ್ಟ ವ್ಯಕ್ತಿ!
ರಸ್ತೆಯಲ್ಲಿ ಬಿದ್ದು ಆತ ಒದ್ದಾಟ ನಡೆಸುತ್ತಿದ್ದರೆ, ಗಂಡನನ್ನು ಉಳಿಸಿಕೊಡಿ ಎಂದು ಪತ್ನಿ ರಸ್ತೆಗೆ ಹೋಗುವ ಕಾರು, ಬೈಕ್, ಗೂಡ್ಸ್ ವಾಹನ ಎಲ್ಲದಕ್ಕೂ ಕೈಹಾಕಿದ್ದಾರೆ. ಆದರೆ, ಯಾರೂ ಕೂಡ ತಮ್ಮ ವಾಹನ ನಿಲ್ಲಿಸಲಿಲ್ಲ.

Dr Rajkumar Eye Bank: ಪುನೀತ್ ನಿಧನದ ನಂತರ 3.9 ಸಾವಿರ ನೇತ್ರ ಸಂಗ್ರಹ
30 ವರ್ಷಗಳಲ್ಲಿ 75,000 ನೇತ್ರದಾನ ಪ್ರತಿಜ್ಞೆಗಳನ್ನು ಹೊಂದಿದ್ದ ಕಣ್ಣಿನ ಬ್ಯಾಂಕ್ ಕೇವಲ ನಾಲ್ಕು ವರ್ಷಗಳಲ್ಲಿ ಸುಮಾರು 1.3 ಲಕ್ಷ ಪ್ರಮಾಣ ಪಡೆದುಕೊಂಡಿದೆ.

ನೇತ್ರದಾನ ಮಹಾದಾನ: ಜಾಗೃತಿ ಕಾರ್ಯಕ್ರಮಗಳ ನಡುವೆಯೂ ರಾಜ್ಯದಲ್ಲಿ ಕೇವಲ 845 ಮಂದಿ ಮಾತ್ರ ಕಣ್ಣುಗಳ ದಾನಕ್ಕೆ ಮುಂದು!
ನೇತ್ರದಾನ ಸರ್ವಕಾಲಕ್ಕೂ ಶ್ರೇಷ್ಠದಾನ. ಪ್ರತಿಯೊಬ್ಬರt ತಮ್ಮ ಅಮೂಲ್ಯವಾದ ದೃಷ್ಟಿಯನ್ನು ತಮ್ಮ ಜೀವಿತಾವಧಿಯ ನಂತರ ಮತ್ತಿಬ್ಬರಿಗೆ ನೀಡಬಹುದಾಗಿದೆ. ಆ ಮೂಲಕ ತಮ್ಮ ಕಣ್ಣುಗಳನ್ನು ತಮ್ಮ ನಂತರವು ಈ ಸುಂದರವಾದ ಪ್ರಪಂಚವನ್ನು ನೋಡಲು ಬಳಸಬಹುದಾಗಿದೆ.

ರಾಷ್ಟ್ರೀಯ ನೇತ್ರದಾನ ಪಾಕ್ಷಿಕ: ಸೆಲೆಬ್ರಿಟಿಗಳ ಒಳಗೊಳ್ಳುವಿಕೆ ನೇತ್ರದಾನಕ್ಕೆ ಜನರನ್ನು ಹೆಚ್ಚು ಪ್ರೇರೇಪಿಸುತ್ತದೆ
ನೇತ್ರದಾನ, ಕಾರ್ನಿಯಲ್ ಕುರುಡುತನ ಮತ್ತು ಕಾರ್ನಿಯಾ ಕಸಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಪ್ರತಿವರ್ಷ ಆಗಸ್ಟ್ 25 ಮತ್ತು ಸೆಪ್ಟೆಂಬರ್ 8ರ ನಡುವೆ ಆಚರಿಸಲಾಗುತ್ತದೆ.

ಬೆಂಗಳೂರು: ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದ ಡಾ. ಭುಜಂಗ ಶೆಟ್ಟಿ
ಬದುಕಿದ್ದಾಗ ಲಕ್ಷಾಂತರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಅಂಧಕಾರವನ್ನ ಕಳೆದು ಬೆಳಕು ನೀಡಿದ್ದ ಖ್ಯಾತ ವೈದ್ಯ ಭುಜಂಗಶೆಟ್ಟಿ. ಮೃತಪಟ್ಟ ಬಳಿಕವೂ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕು ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಡಾ. ರಾಜ್ ಕುಟುಂಬದ ಮಾದರಿಯಲ್ಲೇ ಹಿರಿಯ ನಿರ್ದೇಶಕ ಭಗವಾನ್ ನೇತ್ರದಾನ
ಡಾ.ರಾಜ್ ಕುಮಾರ್ ಅವರಂತೆಯೇ ಇಂದು ನಿಧನರಾದ ಹಿರಿಯ ನಿರ್ದೇಶಕ ಭಗವಾನ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದರಿಂದ ಮೂರ್ನಾಲ್ಕು ಜನರಿಗೆ ದೃಷ್ಟಿ ಬರಲಿದೆ.

'ಒಂದು ಮಿಸ್ಡ್ ಕಾಲ್ ನೀಡಿ, ನೇತ್ರ ದಾನ ಮಾಡಿ': ನಾರಾಯಣ ನೇತ್ರಾಲಯ ಮನವಿ
ನೇತ್ರದಾನ ಮಹಾದಾನ, ಆದರೆ ಅದನ್ನು ಹೇಗೆ ದಾನ ಮಾಡುವುದು, ಪ್ರಕ್ರಿಯೆ ಹೇಗೆ ಎಂದು ಹಲವರಿಗೆ ಗೊತ್ತಿರುವುದಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ಕಣ್ಣುಗಳ ಬೇಡಿಕೆಗೆ ತಕ್ಕಂತೆ ಪೂರೈಸಲು ನಾರಾಯಣ ನೇತ್ರಾಲಯ ಡಾ ರಾಜ್ ಕುಮಾರ್ ನೇತ್ರ ಬ್ಯಾಂಕ್ ಮೂಲಕ ವಿಶೇಷ ಸಂಖ್ಯೆಯನ್ನು ಆರಂಭಿಸಿದೆ.

ದೇಶದಲ್ಲಿ ನೇತ್ರದಾನಿಗಳ ತೀವ್ರ ಕೊರತೆ; ಜಾಗೃತಿ ಮೂಡಿಸುವ ಕೆಲಸ ಆಗಬೇಕು: ಸಚಿವ ಡಾ.ಕೆ.ಸುಧಾಕರ್
ಶವದಿಂದ ಕಣ್ಣನ್ನು ತೆಗೆದರೆ ಮುಖ ವಿಕಾರವಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಇದೆ. ಆದರೆ ಇದು ಸುಳ್ಳು. ಕನ್ನಡದ ವರನಟ ಡಾ.ರಾಜ್ ಕುಮಾರ್, ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತಹ ಮಹಾನ್ ವ್ಯಕ್ತಿಗಳು ಕಣ್ಣು ದಾನ ಮಾಡಿದ್ದರು.

ಪುನೀತ್ ರಾಜ್ ಕುಮಾರ್ ಪ್ರೇರಣೆ: ಕುಟುಂಬ ಸದಸ್ಯರ ನೇತ್ರದಾನಕ್ಕೆ ಮುಂದಾದ ಎಂ.ಪಿ. ರೇಣುಕಾಚಾರ್ಯ
ಇತ್ತೀಚಿಗೆ ನಿಧನರಾದ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಖ್ಯಾತಿಯ ಪುನೀತ್ ರಾಜ್ ಕುಮಾರ್ ಅವರಿಂದ ಪಡೆದ ಪ್ರೇರಣೆಯಿಂದ ತಮ್ಮ ಕುಟುಂಬದ ಸದಸ್ಯರೆಲ್ಲರ ನೇತ್ರವನ್ನು ಮರಣಾ ನಂತರ ದಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

