ರಾಜ್ಯಬೆಂಗಳೂರು: ನೆರೆಮನೆಯ ವೃದ್ಧೆಯನ್ನು ಕೊಂದು ಶವವನ್ನು ವಾರ್ಡ್ ರೋಬ್ನಲ್ಲಿ ಬಚ್ಚಿಟ್ಟು ಮಹಿಳೆ ಪರಾರಿ!
ಮಹಿಳೆಯೊಬ್ಬರು ತನ್ನ ನೆರೆಮನೆಯಲ್ಲಿದ್ದ ವೃದ್ಧೆಯನ್ನು ಕೊಲೆ ಮಾಡಿ ಶವವನ್ನು ವಾರ್ಡ್ರೋಬ್ನಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾಳೆ. ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಘಟನೆ ನಡೆದಿದ್ದು, ಮೃತರನ್ನು ನೇರಲೂರು ಗ್ರಾಮದ ಪಾರ್ವತಮ್ಮ(80) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.