ಸಿನಿಮಾ ಸುದ್ದಿನೆಗೆಟಿವ್ ಕಮೆಂಟ್ ಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನ್ನ ಅಭಿಪ್ರಾಯ ಭಯವಿಲ್ಲದೆ ಮುಂದುವರೆಯುತ್ತದೆ: ನಟ ಜಗ್ಗೇಶ್
ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷಗಳಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದು ತಮ್ಮ ಸಿನಿಪಯಣದ ಆರಂಭದ ದಿನಗಳು, ನಂತರ ಚಿತ್ರರಂಗದಲ್ಲಿ ಬೆಳೆದದ್ದು, ಸಹಾಯ, ಸಹಕಾರ ನೀಡಿದ ಕಲಾವಿದರು, ವೈಯಕ್ತಿಕ ಜೀವನ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು.