ನೀರು ಪಾಲು

ರಾಮನಗರ: ಕುರಿ ತೊಳೆಯಲು ಹೋಗಿದ್ದಾಗ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವು
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮುತ್ತ ಸಾಗರ ಗ್ರಾಮದಲ್ಲಿ ಕುರಿ ಮೈ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಚಿತ್ರದುರ್ಗ: ಕೆರೆಯಲ್ಲಿ ಮುಳುಗಿ ತಾಯಿ, ಮಕ್ಕಳಿಬ್ಬರ ಸಾವು, ಗಂಡನ ಮೇಲೆ ಶಂಕೆ!
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವಂತಹ ದಾರುಣ ಘಟನೆ ನಡೆದಿದೆ.

ಬೀದರ್: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಜಲಸಮಾಧಿ!
ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಂಗಟಿ ಗ್ರಾಮದಲ್ಲಿ ನಡೆದಿದೆ.

ಬೀದರ್: ಕೆರೆಗೆ ಈಜಲು ತೆರಳಿದ್ದ ನಾಲ್ವರು ಜಲಸಮಾಧಿ
ಕೆರೆಗೆ ಈಜಲು ತೆರಳಿದ್ದ ನಾಲ್ವರು ನೀರು ಪಾಲಾದ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಘೋಡವಾಡಿ ಗ್ರಾಮದ ಇಸ್ಮಾಯಿಲ್ ಖಾದ್ರಿ ದರ್ಗಾ ಹತ್ತಿರದ ಬಳಿ ಭಾನುವಾರ ಸಂಭವಿಸಿದೆ.

ಬಾಗಲಕೋಟೆ: ಒಂದೇ ಕುಟುಂಬದ ಮೂವರು ನೀರು ಪಾಲು
ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದ ಬಳಿ ನಡೆದಿದೆ. ಮೃತರನ್ನು ವಿಶ್ವನಾಥ್ ಮಾವಿನ ಮರದ (40), ಪತ್ನಿ ಶ್ರಿದೇವಿ ಮಾವಿನಮರದ (32) ಹಾಗೂ ಮಗಳು ನಂದಿನಿ (12) ಎಂದು ಗುರುತಿಸಲಾಗಿದೆ.

ಬಾಗಲಕೋಟೆ: ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು
ಮಲಪ್ರಭಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬದಾಮಿ ಪಟ್ಟಣದಲ್ಲಿ ವರದಿಯಾಗಿದೆ.

ನಾಗಮಂಗಲ: ಇಬ್ಬರು ಬಾಲಕರು ಸೇರಿ ಮೂವರು ನೀರು ಪಾಲು
ಇಬ್ಬರು ಬಾಲಕರು ಮತ್ತು ಓರ್ವ ಯುವಕ ಸೇರಿದಂತೆ ಒಟ್ಟು ಮೂವರು ನೀರುಪಾಲಾಗಿರುವ ಘಟನೆ ನಾಗಮಂಗಲ ತಾಲ್ಲೂಕಿನ ದಡಗ ಮತ್ತು ಉಪ್ಪಾರಹಳ್ಳಿಯಲ್ಲಿಂದು ನಡೆದಿದೆ. ದಡಗ ಗ್ರಾಮದ ಮನು (೧೨) ಹಾಗೂ ಪುನೀತ್ (೧೦) ಎಂಬ ಬಾಲಕರು ಮತ್ತು ಉಪ್ಪಾರಹಳ್ಳಿಯ ವಿಜಯ್ ಕುಮಾರ್ (೨೫) ಮೃತ ದುರ್ದೈವಿಗಳು.

ಶಿವಮೊಗ್ಗ: ಈಜಲು ತೆರಳಿದ್ದ ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲು
ಶನಿವಾರ ಶಾಲೆ ಮುಗಿಸಿ ಈಜಲೆಂದು ಕೆರೆಗೆ ತೆರಳಿದ್ದ ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಶಿರಾಳಕೊಪ್ಪ ಸಮೀಪ ನಡೆದಿದೆ.

ಬಳ್ಳಾರಿ: ಸೆಲ್ಫಿ ಹುಚ್ಚಿಗೆ ಇಬ್ಬರು ಯುವಕರು ನೀರು ಪಾಲು
ತೆಪ್ಪದಲ್ಲಿ ಸಾಗುವಾಗ ಸೆಲ್ಫೀ ತೆಗೆದುಕೊಳ್ಳಲು ಹೋದ ಇಬ್ಬರು ಯುವಕರು ತೆಪ್ಪ ಮುಳುಗಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಡಣಾಯಕನ ಕೆರೆ ಗ್ರಾಮದಲ್ಲಿ ಸಂಭವಿಸಿದೆ.

