ರಾಜ್ಯ'ನೀರು ಉಳಿಸಿ, ಬೆಂಗಳೂರು ಬೆಳೆಸಿ' ಅಭಿಯಾನ; ನೀರನ್ನು ವಿವೇಚನೆಯಿಂದ ಬಳಸಿ: ಡಿಕೆ ಶಿವಕುಮಾರ್ ಸಲಹೆ
ಬರದ ಸಂದರ್ಭದಲ್ಲಿ ನಾವೆಲ್ಲರೂ ಜವಾಬ್ದಾರಿಯುತವಾಗಿ ಮತ್ತು ವಿವೇಚನೆಯಿಂದ ನೀರನ್ನು ಬಳಸಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ‘ನೀರು ಉಳಿಸಿ, ಬೆಂಗಳೂರು ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿ, ಅಂತರ್ಜಲ ಮತ್ತು ನೀರಿನ ಸಂರಕ್ಷಣೆಗೆ BWSSB ಅಭಿವೃದ್ಧಿಪಡಿಸಿದ ನಾಲ್ಕು ಮೊಬೈಲ್ ಅಪ್ಲಿಕೇಶನ್ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.