ರಾಜ್ಯಕೈ ಸುಡುವ ತಣ್ಣೀರು! ನೀರಿನ ಶುಲ್ಕ 35% ಹೆಚ್ಚಳಕ್ಕೆ ಬಿಡಬ್ಲ್ಯೂಎಸ್ಎಸ್ಬಿ ತೀರ್ಮಾನ
ಬೆಂಗಳೂರು ನಾಗರಿಕರಿಗೆ ಇದೀಗ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಈ ಬಾರಿ ತಣ್ನಗಿನ ನೀರು ಕೈ ಸುಡುವಂತೆ ಮಾಡಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯೂಎಸ್ಎಸ್ಬಿ) ನೀರಿನ ಬೆಲೆ ಏರಿಕೆ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಒಂದು ವೇಳೆ ಸರ್ಕಾರ ಅನುಮತಿಸಿದರೆ ನಿಮ್ಮ ನೀರಿನ ಬಿಲ್ ಶೇಕಡಾ 35 ರಷ್ಟು ಹೆಚ್ಚಾಗಬಹುದು.