ರಾಜ್ಯಸಾರಿಗೆ ನೌಕರರ ಮುಷ್ಕರ: ಒಪ್ಪಂದದ ಆಧಾರದ ಮೇಲೆ ನಿವೃತ್ತ ಚಾಲಕ, ನಿರ್ವಾಹಕರ ನಿಯೋಜನೆ!
ಸಾರಿಗೆ ನೌಕರರ ಮುಷ್ಕರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯುಂಟಾಗದಿರಲು ಹೊಸಹೊಸ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುತ್ತಿರುವ ಸಾರಿಗೆ ಇಲಾಖೆ, ಇದೀಗ ಸೇವೆಗೆ ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸುತ್ತಿದೆ.