ರಾಜ್ಯಶ್ರಮಿಕ್ ರೈಲು ನಿಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ: ವಲಸೆ ಕಾರ್ಮಿಕರಿಗಾಗಿ 100 ರೈಲು ವ್ಯವಸ್ಥೆ
ವಲಸೆ ಕಾರ್ಮಿಕರು, ಪ್ರತಿಪಕ್ಷ ನಾಯಕರು ಹಾಗೂ ನಾಗರಿಕ ಹೋರಾಟಗಾರರ ತೀವ್ರ ಒತ್ತಡದಿಂದಾಗಿ ಶ್ರಮಿಕ್ ವಿಶೇಷ ರೈಲುಗಳನ್ನು ನಿಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯ ಸರ್ಕಾರ, ನಾಳೆಯಿಂದ ಮೇ. 15ರವರೆಗೂ 9 ರಾಜ್ಯಗಳಿಗೆ 100ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ಇಂದು ನಿರ್ಧರಿಸಿದೆ.