ದೇಶವಲಸೆ ಹೋದ ಜನರು, ಕಾಡಿನಂತಾದ ಊರು; ಉತ್ತರಾಖಂಡದ ಈ 24 ಗ್ರಾಮಗಳಲ್ಲಿ ಮತಗಟ್ಟೆಯೇ ಇಲ್ಲ!
ಆಳೆತ್ತರ ಕಳೆ ಬೆಳೆದು ನಿಂತ ಹೊಲ, ಗದ್ದೆಗಳು. ಹಾಡಹಗಲೇ ರಾಜಾರೋಷವಾಗಿ ತಿರುಗುವ ಕಾಡು ಪ್ರಾಣಿಗಳು. ಜನರಿಲ್ಲದೆ ಪಾಳುಬಿದ್ದ ಮನೆಗಳು ಮತ್ತು ಸ್ಮಶಾನ ಮೌನ. ಉತ್ತರಾಖಂಡದ ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಿದು. ಇದು ಕೇವಲ ಒಂದು ಗ್ರಾಮದ ಕಥೆಯಲ್ಲ. ನೂರಾರು ಗ್ರಾಮಗಳ ಸ್ಥಿತಿ ಹೀಗೆಯೇ ಇದೆ.