ರಾಜ್ಯನಿಗಮ-ಮಂಡಳಿ ಅಧ್ಯಕ್ಷರ ನೇಮಕ: ಸಿಎಂ-ಡಿಸಿಎಂ ದೆಹಲಿಗೆ ಪ್ರಯಾಣ, ಶೀಘ್ರದಲ್ಲೇ ಪ್ರಕಟ ಸಾಧ್ಯತೆ
ನಿಗಮ-ಮಂಡಳಿ ಅಧ್ಯಕ್ಷರ ನೇಮಕಕ್ಕೆ ರಾಜ್ಯದಿಂದ ಅಖೈರುಗೊಳಿಸಿ ಕಳುಹಿಸಿರುವ ಪಟ್ಟಿಗೆ ಅಂಕಿತ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹಾಗೂ ಸಚಿವರ ತಂಡ ಸೋಮವಾರ ದೆಹಲಿಗೆ ಭೇಟಿ ನೀಡುತ್ತಿದ್ದು, ಹೈಕಮಾಂಡ್ ಜೊತೆಗಿನ ಅಂತಿಮ ಹಂತದ ಚರ್ಚೆ ಬಳಿಕ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.