ದೇಶಉಷ್ಣ ಅಲೆಗೆ ದೆಹಲಿ ತತ್ತರ: 4 ದಿನಗಳಲ್ಲಿ 435 ಮಂದಿ ಬಲಿ; ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ರೀತಿ ಪರಿಸ್ಥಿತಿ ನಿರ್ಮಾಣ!
ನವದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣ ಅಲೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಉಷ್ಣ ಗಾಳಿಯಿಂದಾಗಿ ಜನರು ಆಘಾತಕ್ಕೊಳಗಾಗಿ ನಿಂತಲ್ಲೇ ಕುಸಿದುಬಿದ್ದು, ಉಸಿರು ಚೆಲ್ಲುತ್ತಿದ್ದಾರೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಬರೋಬ್ಬರಿ 435 ಮಂದಿ ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದಾರೆ.