ರಾಜ್ಯವೈದ್ಯಕೀಯ ಸೀಟು ಕೊಡಿಸುವುದಾಗಿ 4.5 ಲಕ್ಷ ರು. ಪಂಗನಾಮ: ಗೃಹ ಸಚಿವ ಪರಮೇಶ್ವರ್ ಆಪ್ತನೆಂದು ಹೇಳಿ ವಂಚನೆ!
ಗೃಹ ಸಚಿವ ಡಾ.ಪರಮೇಶ್ವರ ಅವರ ಆಪ್ತರೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು, ಸಚಿವರ ಜತೆಗಿರುವ ಚಿತ್ರಗಳನ್ನು ತೋರಿಸಿ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ 53 ವರ್ಷದ ವ್ಯಕ್ತಿಯೊಬ್ಬರಿಗೆ 4.5 ಲಕ್ಷ ರೂಪಾಯಿ ವಂಚಿಸಿದ್ದಾರೆ.