ರಾಜ್ಯರಾಜ್ಯದಲ್ಲಿ ಮುಂಗಾರು ಅಂತ್ಯ: 236 ತಾಲ್ಲೂಕುಗಳ ಪೈಕಿ ಕೇವಲ 4 ತಾಲ್ಲೂಕುಗಳಲ್ಲಿ ಮಾತ್ರ ಅತ್ಯಧಿಕ ಮಳೆ!
ರಾಜ್ಯದಲ್ಲಿ ನೈರುತ್ಯ ಮುಂಗಾರು ಇಂದಿಗೆ ಮುಗಿದಿದೆ. ಸಾಮಾನ್ಯವಾಗಿ ಜೂನ್ 1 ರಿಂದ ಸೆಪ್ಟೆಂಬರ್ 30ರ ಅವಧಿಯನ್ನು ಮುಂಗಾರು ಎನ್ನಲಾಗುತ್ತದೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯದ 236 ತಾಲ್ಲೂಕುಗಳ ಪೈಕಿ ಕೇವಲ 4 ತಾಲ್ಲೂಕುಗಳಲ್ಲಿ ಮಾತ್ರ ಈ ಬಾರಿ ಅತ್ಯಧಿಕ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತ ಪಟ್ಟಿಯನ್ನು ಬಿಡುಗಡೆ ಮಾಡಿದೆ.