ದೇಶಜಮ್ಮುನಲ್ಲಿ ನಾರ್ಕೊಟಿಕ್ಸ್ ಕಳ್ಳಸಾಗಣೆ ಯತ್ನ ವಿಫಲಗೊಳಿಸಿದ ಬಿಎಸ್ಎಫ್: ಪಾಕಿಸ್ತಾನದ ಸ್ಮಗ್ಲರ್ ಹತ್ಯೆ
ಗಡಿ ಭದ್ರತಾ ಪಡೆ ಪೊಲೀಸರು(BSF) ಮಾದಕ ವಸ್ತು ಕಳ್ಳಸಾಗಣೆ ಯತ್ನವನ್ನು ನಾಶಪಡಿಸಿ ಪಾಕಿಸ್ತಾನದ ಶಂಕಿತ ಕಳ್ಳ ಸಾಗಣೆದಾರನನ್ನು ಕೊಂದು ಹಾಕಿದ್ದಾರೆ. ಜಮ್ಮುವಿನ ಸಾಂಬಾ ವಲಯದ ರಾಮ್ ಗರ್ ಪ್ರದೇಶದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಗಡಿ ಭದ್ರತಾ ಪಡೆ ಪೊಲೀಸರು ತಿಳಿಸಿದ್ದಾರೆ.