ರಾಜ್ಯಐಕಿಯಾ ಶಾಪಿಂಗ್ ಮಾಲ್'ಗೆ ಜನಸಾಗರ: ತುಮಕೂರು ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ
ತುಮಕೂರು ರಸ್ತೆ ನಾಗಸಂದ್ರ ಸಮೀಪ ಆರಂಭವಾಗಿರುವ ಪ್ರಖ್ಯಾತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಐಕಿಯಾ ಶಾಪಿಂಗ್ ಮಾಲ್'ಗೆ ಶನಿವಾರ ಮತ್ತು ಭಾನುವಾರ ಸಾಗರೋಪಾದಿಯಲ್ಲಿ ಗ್ರಾಹಕರು ಹರಿದು ಬಂದಿದ್ದು, ಇದರ ಪರಿಣಾಮ ತುಮಕೂರು ರಸ್ತೆಯಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಎದುರಾಗಿ, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.