ದೇಶಬಿಲ್ಕಿಸ್ ಬಾನೊ ಪ್ರಕರಣದ 'ಭಯಾನಕ ತಪ್ಪು ನಿರ್ಧಾರ' ಸರಿಪಡಿಸಿ: 134 ಮಾಜಿ ಅಧಿಕಾರಿಗಳಿಂದ ಸಿಜೆಐಗೆ ಪತ್ರ
ಬಿಲ್ಕಿಸ್ ಬಾನೊ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ 11 ಮಂದಿಯನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿರುವುದರ ವಿರುದ್ಧ ಧನಿ ಎತ್ತಿರುವ 130 ಕ್ಕೂ ಹೆಚ್ಚು ಮಾಜಿ ನಾಗರಿಕ ಸೇವಕ ಅಧಿಕಾರಿಗಳು ಶನಿವಾರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರಿಗೆ ಬಹಿರಂಗ ಪತ್ರ ಬರೆದು ಈ “ಭಯಾನಕ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ.