ರಾಜ್ಯನಾಗಮೋಹನ್ ದಾಸ್ ಸಮಿತಿಗೆ 6,000 ಪುಟಗಳ ದಾಖಲೆ ಸಲ್ಲಿಸಿದ ಕೆಂಪಣ್ಣ
ರಾಜ್ಯದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಗುತ್ತಿಗೆದಾರರ ಬಿಲ್ ಪಾವತಿಸಲು ಶೇ. 40 ರಷ್ಟು ಕಮಿಷನ್ ಆರೋಪದ ಬೇಡಿಕೆ ಪುಷ್ಟಿಕರಿಸಲು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮತ್ತು ಸಂಘದ ಇತರ ಪದಾಧಿಕಾರಿಗಳು ಗುರುವಾರ ನ್ಯಾಯಮೂರ್ತಿ ನಾಗಮೋಹನ್ ನೇತೃತ್ವದ ಸಮಿತಿಗೆ 6,000 ಪುಟಗಳ ದಾಖಲೆಗಳನ್ನು ಸಲ್ಲಿಸಿದ್ದಾರೆ.