ಸಿನಿಮಾ ಸುದ್ದಿರವಿಚಂದ್ರನ್ ನನ್ನ ಅತ್ಯುತ್ತಮ ಸಹ ನಟರಲ್ಲಿ ಒಬ್ಬರು: ನವ್ಯ ನಾಯರ್
2014ರಲ್ಲಿ ಬಿಡುಗಡೆಯಾಗಿದ್ದ ಕನ್ನಡ ಚಿತ್ರ 'ದೃಶ್ಯ'ದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನವ್ಯ ನಾಯರ್, ಆರು ವರ್ಷಗಳ ನಂತರ 'ದೃಶ್ಯ 2' ಚಿತ್ರದೊಂದಿಗೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಇದೇ ಶುಕ್ರವಾರ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆ ಹಿನ್ವೆಲೆಯಲ್ಲಿ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ನವ್ಯ ನಾಯರ್, ಸಿಕ್ವೆಲ್ ಗೆ ವಾಪಸ್ಸಾದ ಬಗ್ಗೆ ಮಾತನಾಡಿದ್ದಾರೆ.