ಭಕ್ತಿ-ಜ್ಯೋತಿಷ್ಯಜೀವಜೀವರಲ್ಲಿ ದೇವಾಸುರ ಸಂಗ್ರಾಮ; ಆತ್ಮರೂಪಿ ಶ್ರೀಲಲಿತೆಯೂ ಷಡ್ವೈರಿಗಳೆಂಬ ಅಸುರರೂ
ಅನಂತ ಬ್ರಹ್ಮಾಂಡಗಳ ಶಕ್ತಿಪುಂಜ ಶ್ರೀಲಲಿತೆ. ಸೃಷ್ಟಿಕರ್ತ ಬ್ರಹ್ಮನಿಗೆ ಜ್ಞಾನರೂಪಿಣಿಯಾಗಿ, ವೀಣಾಪಾಣಿಯಾಗಿ, ಶಾರದೆಯಾಗಿ ಜೊತೆಯಾದವಳು. ತಾನೇ ಸೃಜಿಸಿದ ಮಾಯಾಲೋಕದ ಪಾಲಕ, ಯೋಗಮಾಯಾ ರೂಪಿ ಶ್ರೀಹರಿಯ ಶ್ರೀಯಾಗಿ, ಸಕಲ ಸಂಪದದ ಒಡತಿ ಲಕ್ಷ್ಮೀಯಾಗಿ ಶಕ್ತಿ ತುಂಬಿದವಳು.