ಬಾಲಿವುಡ್ಸುಲಿಗೆ ಪ್ರಕರಣ: ಜಾಕ್ವೆಲಿನ್ ನಂತರ ವಿಚಾರಣೆಗೆ ಹಾಜರಾಗಲು ನಟಿ ನೋರಾ ಫತೇಹಿಗೆ ದೆಹಲಿ ಪೊಲೀಸರ ಸಮನ್ಸ್
ವಂಚಕ ಸುಖೇಶ್ ಚಂದ್ರಶೇಖರ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಬುಧವಾರ ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿರುವ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು, ಫರ್ನಾಂಡೀಸ್ ಅವರನ್ನು ಚಂದ್ರಶೇಖರ್ ಗೆ ಪರಿಚಯಿಸಿದ ನಟಿ ನೋರ್ ಫತೇಹಿ ಗುರುವಾರ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ.