ಸಿನಿಮಾ ಸುದ್ದಿದರ್ಶನ್ ಅಭಿನಯದ 'ನವಗ್ರಹ' ಚಿತ್ರಕ್ಕೆ 15 ವರ್ಷ; ಬರಲಿದೆಯಾ ನವಗ್ರಹ 2; ದಿನಕರ್ ತೂಗುದೀಪ ಹೇಳಿದ್ದೇನು?
ನವಗ್ರಹ, ಸಾರಥಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ದಿನಕರ್ ತೂಗುದೀಪ. ಅವರು ತಮ್ಮ ಮುಂಬರುವ 'ರಾಯಲ್' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ನಿರ್ದೇಶಕರು ಇತ್ತೀಚೆಗಷ್ಟೇ ತಮ್ಮ ನಿರ್ದೇಶನದ 'ನವಗ್ರಹ' (2008) ಚಿತ್ರದ 15ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.