ದೇಶನಿರ್ವಸಿತರ ಪುನರ್ವಸತಿಗೆ ಒತ್ತಾಯಿಸಿ ಉಪವಾಸ: ಮೇಧಾ ಪಾಟ್ಕರ್ ಆರೋಗ್ಯದಲ್ಲಿ ಏರುಪೇರು
ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯಿಂದ ನಿರ್ವಸಿತರಾದವರಿಗೆ ಪುನರ್ವಸತಿಗಾಗಿ ಕಳೆದ ಎಂಟು ದಿನಗಳಿಂದ ಉಪವಾಸ ನಡೆಸಿರುವ ನರ್ಮದಾ ಬಚಾವೊ ಆಂಡೋಲನ್ (ಎನ್ಬಿಎ) ನಾಯಕಿ ಮೇಧಾ ಪಾಟ್ಕರ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ಅವರ ಕೆಲವು ಸಹ ಪ್ರತಿಭಟನಾಕಾರರು ಹೇಳಿದ್ದಾರೆ.