ರಾಜ್ಯದೆಹಲಿಯ 'ಅಮೃತ ವನ' ನಿರ್ಮಾಣಕ್ಕೆ ದಕ್ಷಿಣ ಕನ್ನಡದಿಂದ ಮಣ್ಣನ್ನು ಕಳುಹಿಸಲಾಗುವುದು: ನಳಿನ್ ಕುಮಾರ್ ಕಟೀಲ್
ಮಂಗಳೂರಿನಲ್ಲಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿದ ದಕ್ಷಿಣ ಕನ್ನಡ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ಕುಮಾರ್ ಕಟೀಲ್, ‘ದಕ್ಷಿಣ ಕನ್ನಡದ ಮಣ್ಣನ್ನು ಸಂಗ್ರಹಿಸಿ, ದೆಹಲಿಯ ಕರ್ತವ್ಯ ಪಥದಲ್ಲಿ ಹುತಾತ್ಮರ ಸ್ಮಾರಕ ಉದ್ಯಾನವನ 'ಅಮೃತ ವನ' ನಿರ್ಮಾಣಕ್ಕೆ ಕಳುಹಿಸಲಾಗುವುದು ಎಂದರು.