ಸಿನಿಮಾ ಸುದ್ದಿವಸಿಷ್ಠ ಸಿಂಹ ನಟನೆಯ 'Love... ಲಿ' ಚಿತ್ರದ ಹಾಡಿಗೆ ನಂದು, ಕಾವ್ಯ ಶೆಟ್ಟಿ ಹೆಜ್ಜೆ
ವಸಿಷ್ಠ ಸಿಂಹ ನಟನೆಯ 'Love... ಲಿ' ಚಿತ್ರತಂಡ ನಟಿ ಕಾವ್ಯಾ ಶೆಟ್ಟಿ ಮತ್ತು ಬಿಗ್ ಬಾಸ್ ಮತ್ತು ರೋಡೀಸ್ ಖ್ಯಾತಿಯ ನಂದು ಅವರನ್ನೊಳಗೊಂಡ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಿದೆ. 'Love... ಲಿ' ಚಿತ್ರದ ಮೊದಲ 'ಚಿಕ್ಕಿಮಿಕ್ಕಾ' ಶೀರ್ಷಿಕೆಯ ಹಾಡು ಇದೀಗ ಕೇಳುಗರ ಗಮನ ಸೆಳೆದಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ.