ರಾಜ್ಯಪರಿಷತ್ತಿನಲ್ಲಿ ಸೋಲಾಗಿದ್ದ ಹಿಂದೂ ಧಾರ್ಮಿಕ ದತ್ತಿ ಮಸೂದೆಗೆ ವಿಧಾನಸಭೆಯಲ್ಲಿ ಮತ್ತೆ ಅಂಗೀಕಾರ!
ಕಳೆದ ವಾರ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ಬಿಜೆಪಿ-ಜೆಡಿ(ಎಸ್) ಮೈತ್ರಿಯಿಂದ ಪರಾಭವಗೊಂಡಿದ್ದ 10 ಲಕ್ಷ ರೂ.ಗೂ ಅಧಿಕ ವಾರ್ಷಿಕ ಆದಾಯವಿರುವ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸುವ ಮಸೂದೆಯನ್ನು ಮರುಪರಿಶೀಲನೆಗೆ ಗುರುವಾರ ಮತ್ತೊಮ್ಮೆ ಕೈಗೆತ್ತಿಕೊಂಡು ವಿಧಾನಸಭೆ ಅಂಗೀಕರಿಸಿದೆ.