ಸಿನಿಮಾ ಸುದ್ದಿಕಿರುತೆರೆಗೂ ಕೊರೋನಾ ಭೀತಿ! ಮಾರ್ಚ್ 31ರವರೆಗೆ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್
ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೋನಾವೈರಸ್ ಇದೀಗ ಕಿರುತೆರೆಗೆ ಸಹ ಬಿಸಿ ಮುಟ್ಟಿಸಿದೆ. ಕೊರೋನಾ ಕಾರಣದಿಂದಾಗಿ ಮನೆ ಮನೆಗಳಲ್ಲಿ ಮಹಿಳೆಯರು ಕುಳಿತು ನೋಡುವ ಮೆಗಾ ಧಾರಾವಾಹಿಗಳ ಚಿತ್ರೀಕರಣವನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ. ಮುಂದಿನ ಹದಿಮೂರು ದಿನಗಳ ಕಾಲ ಜನಪ್ರಿಯ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣುವ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಲಿದೆ.