ರಾಜ್ಯಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಬೆಂಗಳೂರು: ಧರ್ಮರಾಯಸ್ವಾಮಿ ದೇವಸ್ಥಾನದಿಂದ ವೈಭವದ ಕರಗ ಆರಂಭ; ಲಕ್ಷಾಂತರ ಭಕ್ತರು ಭಾಗಿ
ನಗರದ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮಧ್ಯರಾತ್ರಿಯ ನಂತರ ಮಹಾರಥೋತ್ಸವ ಹೊರಟ ಕೂಡಲೇ ಗರ್ಭಗುಡಿಯಿಂದ ದ್ರೌಪದಿ ದೇವಿಯ ಕರಗ ಮೆರವಣಿಗೆ ಆರಂಭವಾಯಿತು. ಈ ವೇಳೆ “ಗೋವಿಂದಾ... ಗೋವಿಂದಾ...” ಎಂಬ ನಾಮಸ್ಮರಣೆಯೊಂದಿಗೆ ಸಾಗಿದ ಕರಗದ ದರ್ಶನ ಪಡೆದು ಭಕ್ತರು ಪುನೀತರಾದರು.