ರಾಜ್ಯಬೆಳಗಾವಿ: ದೇಹ, ಅಂಗಾಂಗ ದಾನಕ್ಕೆ 75 ಜನರ ಪ್ರತಿಜ್ಞೆ!
ಸಾವಿನ ನಂತರ ದೇಹವನ್ನು ಚಿತೆಗೆ ಹಾಕದೆ ಅಥವಾ ಹೂಳದೆ ಅಪಘಾತ ಮತ್ತಿತರ ಕಾರಣಗಳಿಂದ ಅಂಗಾಂಗ ಕಳೆದುಕೊಂಡ ಎರಡರಿಂದ ಮೂವರ ಜೀವವನ್ನು ಉಳಿಸುವುದರಿಂದ ಎಲ್ಲಾರೂ ದೇಹ, ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಕೆಎಲ್ ಇ ಸೊಸೈಟಿ ನಿರ್ದೇಶಕ ಮಹಾಂತೇಶ್ ಕವಾಟಗಿಮಠ ಹೇಳಿದರು.