ದೇಶಮೋದಿಯಲ್ಲ, ಗಾಂಧೀಜಿ ಮಾತ್ರ ದೇಶದ ಪಿತಾಮಹ: ಫಡ್ನವೀಸ್ ಪತ್ನಿ ವಿರುದ್ದ ಖರ್ಗೆ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪಿತ ಎಂದು ಸಂಭೋದಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತ ಅವರ ವಿರುದ್ದ ತೀವ್ರ ವಾಗ್ದಳಿ ನಡೆಸಿರುವ ಹಿರಿಯ ಕಾಂಗ್ರೆಸ್ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ, ಮಹಾತ್ಮ ಗಾಂಧಿ ಅವರಿಗೆ ಮಾತ್ರ ರಾಷ್ಟ್ರಪಿತ ಎಂಬ ಬಿರುದು ನೀಡಲಾಗಿದೆ ಎಂದು ಬುಧವಾರ ತಿರುಗೇಟು ನೀಡಿದ್ದಾರೆ.